Editor VijayaDarpana

ಎಷ್ಟೊಂದು ವ್ಯವಸ್ಥೆಗಳು, ನಮಗಾಗಿ, ನಿಮಗಾಗಿ, ಆದರೂ,…….

ವಿಜಯ ದರ್ಪಣ ನ್ಯೂಸ್…. ಎಷ್ಟೊಂದು ವ್ಯವಸ್ಥೆಗಳು, ನಮಗಾಗಿ, ನಿಮಗಾಗಿ, ಆದರೂ,……. ಹೋಮಿಯೋಪತಿ, ಅಲೋಪತಿ, ನ್ಯಾಚುರೋಪತಿ, ಆಯುರ್ವೇದಿಕ್, ಪ್ರಾಣಿಕ್ ಹೀಲಿಂಗ್, ಅಕ್ಯುಪಂಕ್ಚರ್, ಆಕ್ಯುಪ್ರೆಷರ್, ಮನೆ ಮದ್ದು …….. ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು. ಯೋಗ, ಧ್ಯಾನ, ಪ್ರಾಣಾಯಾಮ, ಓಟ, ಜಿಗಿತ, ಕುಣಿತ, ಕರಾಟೆ, ಕುಂಗ್ ಪು, ಕಳರಿಪಯಟ್ಟು, ಕುಸ್ತಿ, ಕುದುರೆ ಸವಾರಿ……. ಎಲ್ಲವೂ ದೇಹ ಮನಸ್ಸುಗಳ ಆರೋಗ್ಯಕ್ಕಾಗಿ ಮಾಡಿಕೊಂಡಿರುವ ತಯಾರಿಗಳು. ಓದು, ಬರಹ, ಪ್ರವಾಸ, ನಾಟಕ, ಸಿನಿಮಾ, ಸಂಗೀತ, ಕಲೆ, ನೃತ್ಯ, ಹಾಡು….. ಎಲ್ಲವೂ ಮನರಂಜನೆ ಮತ್ತು…

Read More

ವೈಭವದಿಂದ ನಡೆದ ಶ್ರೀವಾಸವಿ ಜಯಂತಿ 

ವಿಜಯ ದರ್ಪಣ ನ್ಯೂಸ್…. ವೈಭವದಿಂದ ನಡೆದ ಶ್ರೀವಾಸವಿ ಜಯಂತಿ ಶಿಡ್ಲಘಟ್ಟ : ನಗರದಲ್ಲಿ ಆರ್ಯವೈಶ್ಯ ಮಂಡಳಿ ಹಾಗೂ ಸಂಬಂಧಿತ ಸಹ ಸಂಸ್ಥೆಗಳ ಆಶ್ರಯದಲ್ಲಿ ಶ್ರೀವಾಸವಿ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು. ವಾಸವಿ ಮಹಿಳಾ ಮಂಡಳಿ ಮತ್ತು ಭಜನಾ ಮಂಡಳಿಯ ಸದಸ್ಯೆಯರು ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾಗವಹಿಸಿದರು. ಆರು ತಿಂಗಳ ಮಗುವಿನಿಂದ ಎಂಟು ವರ್ಷವರೆಗೆ ಇರುವ ಬಾಲಿಕೆಯರಿಗೆ ಕನ್ಯಕಾ ಪೂಜೆ ನೆರವೇರಿಸಲಾಯಿತು, ವಾಸವಿ ಮಾತೆಯ ಚರಿತ್ರೆಯ ಪಠಣ, ಉಯ್ಯಾಲೆ ಉತ್ಸವ, ಪಂಚಾರತಿ ಕಾರ್ಯಕ್ರಮಗಳು ಭಕ್ತಿಭಾವದಿಂದ ತುಂಬಿದ್ದವು….

Read More

ಮೇ.26 ರಿಂದ ಜೂ.02 ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2

ವಿಜಯ ದರ್ಪಣ ನ್ಯೂಸ್…. ಮೇ.26 ರಿಂದ ಜೂ.02 ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಮೇ,09: 2025 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-01 ರಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಹಾಗೂ ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಅನ್ನು ಮೇ 26 ರಿಂದ ಜೂನ್ 02 ರವರೆಗೆ ನಡೆಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಗೆ ನೊಂದಾಯಿಸಲು ಮೇ 10 ಕೊನೆಯ ದಿನವಾಗಿದ್ದು, ಪರೀಕ್ಷೆ-1ರಲ್ಲಿ ನೋಂದಾಯಿಸಿಕೊಂಡು ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ಹಾಗೂ ಪ್ರಪ್ರಥಮ ಬಾರಿಗೆ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ…

Read More

” ಭಾರತೀಯರಾದ ನಾವು…”

ವಿಜಯ ದರ್ಪಣ ನ್ಯೂಸ್ ….. ” ಭಾರತೀಯರಾದ ನಾವು…” ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಏನೋ ಊಹಿಸುವುದು ಕಷ್ಟ..‌.‌ ನಮ್ಮ ಕಾಲಘಟ್ಟದಲ್ಲಿ ಯುದ್ಧ ತಡೆಯಲು ನಮ್ಮಂತ ಸಾಮಾನ್ಯರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆಯಾಚಿಸುತ್ತಾ, ಇಂತಹ ಸಂದರ್ಭದಲ್ಲಿ ಭಾರತೀಯ ನಾಗರಿಕರಾದ ನಮ್ಮ ಜವಾಬ್ದಾರಿ ಬಹಳ…

Read More

ಭಕ್ತಿ ಭಾವದಿಂದ ನಡೆದ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವ

ವಿಜಯ ದರ್ಪಣ ನ್ಯೂಸ್…. ಭಕ್ತಿ ಭಾವದಿಂದ ನಡೆದ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ ಮಹೋತ್ಸವ ಚಿಕ್ಕಬಳ್ಳಾಪುರ : ತಾಲ್ಲೂಕಿನ ಕಸಬಾ ಹೋಬಳಿ ಪಟ್ರೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಣಕನೂರು ಗ್ರಾಮದಲ್ಲಿ ನೆಲೆಸಿರುವ “ಶ್ರೀ ಈರಲದೇವರು ಮತ್ತು ಕರಗದಮ್ಮದೇವಿ” ದೇವಾಲಯದ ಜೀರ್ಣೋದ್ಧಾರ ಪುನಃಪ್ರತಿಷ್ಠಾಪನೆ, ನಾಗದೇವತಾ ನೂತನ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಸಂಪ್ರದಾಯದಂತೆ ಭಕ್ತಿಭಾವದಿಂದ ಆಚರಿಸಲಾಯಿತು. ದೇವಾಲಯದ ವಕ್ಕಲು ಕುಟುಂಬದ ನಗರ ಹಾಗು ಗ್ರಾಮಗಳಾದ ಚಿಕ್ಕಬಳ್ಳಾಪುರ ತಾಲ್ಲೂಕಿನ,ಚಿಕ್ಕಬಳ್ಳಾಪುರ ನಗರ, ಅಣಕನೂರು ,ಮರಸನಹಳ್ಳಿ ,ಇನಪನಹಳ್ಳಿ, ರಾಮಚಂದ್ರಹೊಸೂರು,ಅರಿಕೆರೆ…

Read More

ಮಾವು-ಹಲಸು ಮಾರಾಟ ಮೇಳಕ್ಕೆ ರೈತರು ನೋಂದಾಯಿಸಿ

ವಿಜಯ ದರ್ಪಣ ನ್ಯೂಸ್… ಮಾವು-ಹಲಸು ಮಾರಾಟ ಮೇಳಕ್ಕೆ ರೈತರು ನೋಂದಾಯಿಸಿ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ ಮೇ07 :ಮಾವು ಮತ್ತು ಹಲಸು ಒಂದು ಋತುಮಾನ ಬೆಳೆಯಾಗಿದ್ದು, ಪ್ರಸ್ತುತ ಹಂಗಾಮಿನಲ್ಲಿ ಮಾವು ಮತ್ತು ಹಲಸು ಬೆಳೆ ಕಟಾವಿಗೆ ಬಂದಿದ್ದು ಮಾವು ಹಾಗೂ ಹಲಸು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವ ಹಿನ್ನೆಲೆಯಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆ ವತಿಯಿಂದ “ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ’ ವನ್ನು ಆಯೋಜಿಸಲು…

Read More

ವೃಷಭಾವತಿ ನೀರು ಈ ಭಾಗದ ರೈತರಿಗೆ ನಮ್ಮ ಸರ್ಕಾರದ ಕೊಡುಗೆ: ಡಿಸಿಎಂ  ಡಿ.ಕೆ ಶಿವಕುಮಾರ್

ವಿಜಯ ದರ್ಪಣ ನ್ಯೂಸ್… ಎತ್ತಿನಹೊಳೆ ನೀರು ಬಯಲು ಸೀಮೆ ಜಿಲ್ಲೆಗಳಿಗೆ ಶೀಘ್ರ ಹರಿಸಲಾಗುವುದು ವೃಷಭಾವತಿ ನೀರು ಈ ಭಾಗದ ರೈತರಿಗೆ ನಮ್ಮ ಸರ್ಕಾರದ ಕೊಡುಗೆ: ಡಿಸಿಎಂ  ಡಿ.ಕೆ ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ 08:ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 243 ಟಿ.ಎಂ.ಸಿ ನೀರನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಯ 70 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗೆ ನೆಲಮಂಗಲ ತಾಲ್ಲೂಕಿನ ಕರೇಗೌಡನಹಳ್ಳಿ ಕೆರೆಯಲ್ಲಿ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ…

Read More

ಮೂಕ ಹಕ್ಕಿಯ ರೋಧನೆ…

ವಿಜಯ ದರ್ಪಣ ನ್ಯೂಸ್…. ಮೂಕ ಹಕ್ಕಿಯ ರೋಧನೆ… ಮೂಕ ಹಕ್ಕಿಯು ಹಾಡುತಿದೆ….. ಹಾಡುತಿದೆ……. ಹಾಡುತಿದೆ……. ಭಾಷೆಗೂ ನಿಲುಕದ ಭಾವ ಗೀತೆಯ ಹಾರಿ ಹಾರಿ ಹಾಡುತಿದೆ…. ಹಾಡುತಿದೆ……. ಹಾಡುತಿದೇ…….. ಹಕ್ಕಿಯ ರೆಕ್ಕೆ ಮುರಿದು ಬೀಳುವವರೆಗೂ….. ಒಂದು ಸಣ್ಣ ಕೆಮ್ಮಿಗೆ, ನೆಗಡಿಗೆ, ಗಂಟಲು ನೋವಿಗೆ, ಹೊಟ್ಟೆ ನೋವಿಗೆ, ಜ್ವರಕ್ಕೆ ಮನುಷ್ಯ ಭಯಪಡುತ್ತಾನೆ, ಬಿಪಿ, ಶುಗರ್, ಕ್ಯಾನ್ಸರ್, ಅಲ್ಸರ್, ಹಾರ್ಟ್ ಅಟ್ಯಾಕ್ ಗೆ ಪತರಗುಟ್ಟಿ ಹೋಗುತ್ತಾನೆ, ಎಷ್ಟೋ ಜನರು ಸಣ್ಣ ಸೂಜಿಯ ಇಂಜೆಕ್ಷನ್ ತೆಗೆದುಕೊಳ್ಳಲೂ ಹೆದರುತ್ತಾರೆ, ಬಹಳಷ್ಟು ಹೆಣ್ಣು ಮಕ್ಕಳು ಜಿರಳೆ…

Read More

ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ 

ವಿಜಯ ದರ್ಪಣ ನ್ಯೂಸ್….. ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಶಿಡ್ಲಘಟ್ಟ : ತಾಲ್ಲೂಕಿನ ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹಿತ್ತಲಹಳ್ಳಿ ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಸಿಎಂ ಎ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಜಪ್ತಿಹೊಸಹಳ್ಳಿ ಪ್ರಕಾಶ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ,ಸಹಾಯಕರಾಗಿ ಪಿಡಿಓ ಕೆ. ಕಾತ್ಯಾಯಿನಿ ಕಾರ್ಯನಿರ್ವಹಿಸಿದರು. ಅಧ್ಯಕ್ಷರ…

Read More

ನಗರಸಭೆ ಸದಸ್ಯತ್ವದಿಂದ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿದ್ದ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್  ತಡೆ

ವಿಜಯ ದರ್ಪಣ ನ್ಯೂಸ್… ನಗರಸಭೆ ಸದಸ್ಯತ್ವದಿಂದ 7 ಮಂದಿ ಸದಸ್ಯರನ್ನು ಅನರ್ಹಗೊಳಿಸಿದ್ದ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್  ತಡೆ ಶಿಡ್ಲಘಟ್ಟ : ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ನಗರಸಭೆಯ 7 ಮಂದಿ ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿ ಆದೇಶ ಮಾಡಿದೆ. ಕಳೆದ 2024 ರ ಸೆಪ್ಟೆಂಬರ್ 5 ರಂದು ನಡೆದಿದ್ದ ನಗರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್…

Read More