ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು…….
ವಿಜಯ ದರ್ಪಣ ನ್ಯೂಸ್…. ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು……. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ, ಚಳವಳಿ, ಪ್ರತಿಭಟನೆ ಮಾಡುತ್ತಿರುವಾಗ ಸರ್ಕಾರ, ವಿರೋಧ ಪಕ್ಷಗಳು, ಸಮಾಜ, ಮಾಧ್ಯಮಗಳು ಅದಕ್ಕೆ ತೀವ್ರವಾಗಿ ಸ್ಪಂದಿಸದಿರುವುದು ನಿಜಕ್ಕೂ ವಿಷಾದನೀಯ….. ಈ ಪಕ್ಷಗಳು ಯಾರ ಹಿತಕ್ಕಾಗಿ ಕೆಲಸ ಮಾಡುತ್ತಿವೆ,…