ಗಣರಾಜ್ಯೋತ್ಸವ 77…….
ವಿಜಯ ದರ್ಪಣ ನ್ಯೂಸ್…. ಗಣರಾಜ್ಯೋತ್ಸವ 77……. ಸಂವಿಧಾನ ಜಾರಿಯಾಗಿ ಸುಮಾರು 76 ವರ್ಷಗಳ ನಂತರ ವಿಶ್ವ ಭೂಪಟದಲ್ಲಿ ಭಾರತವೆಂಬ ದೇಶದ ಒಟ್ಟು ಸಾಧನೆ, ವೈಫಲ್ಯ ಮತ್ತು ಭವಿಷ್ಯವನ್ನು ಸಾಮಾನ್ಯ ವ್ಯಕ್ತಿಯಾಗಿ, ಸರಳವಾಗಿ ಅವಲೋಕಿಸಿದಾಗ ಕಂಡುಬಂದ ಕೆಲವು ಅನುಭವಗಳು ನಿಮ್ಮ ಮುಂದೆ….. ಕೆಲವು ಪ್ರಮುಖ ಸಾಧನೆಗಳು……. ಭಾರತವೆಂಬ ಭೂಪ್ರದೇಶದಲ್ಲಿ ಸುಮಾರು 3000 ಕ್ಕಿಂತ ಹೆಚ್ಚು ವರ್ಷಗಳ ನಾಗರಿಕ ಸಮಾಜದ ಇತಿಹಾಸದಲ್ಲಿ 1950 ಜನವರಿ 26ರ ನಂತರವಷ್ಟೇ ಭಾರತದ ಜನರಿಗೆ ಸಂಪೂರ್ಣ ಸ್ವಾತಂತ್ರ್ಯ, ಸಮಾನತೆ ವ್ಯಕ್ತಿಯ ಘನತೆ, ಬದುಕುವ ಹಕ್ಕು…
