ವಿದ್ಯಾರ್ಥಿಗಳಿಗೆ ಹೂಗುಚ್ಚ ಸಿಹಿ ಹಂಚಿ ಪರೀಕ್ಷಾ ಕೇಂದ್ರಕ್ಕೆ ಬರಮಾಡಿಕೊಂಡ ಶಿಕ್ಷಕರು
ವಿಜಯ ದರ್ಪಣ ನ್ಯೂಸ್…. ವಿದ್ಯಾರ್ಥಿಗಳಿಗೆ ಹೂಗುಚ್ಚ ಸಿಹಿ ಹಂಚಿ ಪರೀಕ್ಷಾ ಕೇಂದ್ರಕ್ಕೆ ಬರಮಾಡಿಕೊಂಡ ಶಿಕ್ಷಕರು ತಾಂಡವಪುರ ಮಾರ್ಚ್ 21 : ಮೈಸೂರು ತಾಲೂಕು ಕಡಕೋಳ ಕ್ಲಸ್ಟರ್ ಮಠದ ಏಳು ಶಾಲೆಯ ವಿದ್ಯಾರ್ಥಿಗಳನ್ನು ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಬಿಕೆಟಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸಿಹಿ ವಿತರಿಸಿ ಅದ್ದೂರಿಯಾಗಿ ಸ್ವಾಗತ ಕೋರಿ ಪರೀಕ್ಷೆ ಕೇಂದ್ರಕ್ಕೆ ಬರಮಾಡಿಕೊಂಡರು…